Friday, 4 June 2021

                                           

                           IMPORTANT  USEFUL GOVT  SITES   

    

                                                                            



Thursday, 2 January 2020

Saturday, 14 September 2019

ಯಕ್ಷಗಾನ ಪ್ರಸಂಗ ಚೂಡಾಮಣಿ

*ಯಕ್ಷಗಾನ ಪ್ರಸಂಗ ಚೂಡಾಮಣಿ*
ಯಕ್ಷಗಾನ ಪ್ರಸಂಗ ಚೂಡಾಮಣಿಯ ಮುಖ್ಯ ಪಾತ್ರಗಳು ನಿಜವಾಗಿ ಹನೂಮಂತ, ರಾವಣ ಮತ್ತು ಸೀತೆ.
ಈ ಪ್ರಸಂಗದ ರಸೋತ್ಪತ್ತಿಯ ಅಂಶಗಳು ಸುಂದರ ರಾವಣ ಅಶೋಕವನದಲ್ಲಿರುವ ಸೀತೆಯ ಮನ ಒಲಿಸಲೆತ್ನಿಸುವ ಏಕಮುಖ ಶೃಂಗಾರ ಮತ್ತು ತಾನು ಶ್ರೀರಾಮನ ದೂತ ಹನೂಮಂತ ಹಾಗೂ ಸೀತೆಯನ್ನು ಬಿಡಿಸಿಕೊಂಡು ಹೋಗುವ ಕೈಂಕರ್ಯದಲ್ಲಿ ಶ್ರೀರಾಮನೇ ಆದಿಯಾಗಿ ಕಪಿವೀರರ ತತ್ಪರತೆ, ಸೀತಾವಿಯೋಗ ಶ್ರೀರಾಮನ ಮೇಲೆ ಬೀರಿದ ಪರಿಣಾಮಗಳ ವಿವರಣೆ, ಕೊನೆಗೆ ಯಾವ ಮಾತುಗಳ ಮೇಲೂ ಪೂರ್ಣ ನಂಬುಗೆ ಮೂಡದ ಸೀತೆಗೆ ಶ್ರೀರಾಮ ಕೊಟ್ಟಿದ್ದ ಕೆಲ ಆಭರಣಗಳನ್ನು ಕೊಟ್ಟು, ಸೀತೆಯನ್ನು ಕಂಡು ಮಾತಾಡಿಸಿ ಬಂದಿದ್ದರ ದ್ಯೋತಕವಾಗಿ ಆಕೆಯಿಂದ ಚೂಡಾಮಣಿಯನ್ನು ಪಡೆದುಕೊಳ್ಳುವುದು. ಇದು ಕರುಣರಸವನ್ನು ಅಭಿವ್ಯಕ್ತಿಗೊಳಿಸಬೇಕು.
ಕಟೀಲು ಮೇಳಗಳಲ್ಲಿ ಕೆಲ ವರ್ಷಗಳ ಹಿಂದೆ ನೋಡಿದ್ದ ಚೂಡಾಮಣಿ ಪ್ರಸಂಗ ಮತ್ತು ಕೆಲ ವರ್ಷಗಳ ಹಿಂದೆ ಕುರುಡಪದವಿನಲ್ಲಿ ಮಾತನಾಡುವ ಭಾಗವತರೆನ್ನುವ ಖ್ಯಾತಿಯ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರ ಸೀತಾ ಪಾತ್ರದಲ್ಲಿ ನೋಡಿದ ಚೂಡಾಮಣಿ ಪ್ರಸಂಗವೇ ಕೊನೆಯ ಉತ್ತಮ ಪ್ರದರ್ಶನ.
ಆ ಬಳಿಕ ಕೆಲ ಚೂಡಾಮಣಿ ಪ್ರಸಂಗಗಳನ್ನು ನೋಡಿದರೆ ಬಹಳ ವಿಚಿತ್ರ. ಸದ್ಯ ಚೂಡಾಮಣಿಯಲ್ಲಿ ಅನುಕೂಲ ನಾರಿಯರೇ ಮುಖ್ಯ ಪಾತ್ರವಾಗಿ ಹೋಗಿದೆ ಮಾತ್ರವಲ್ಲದೆ ಹಾಸ್ಯರಸವೇ ಪ್ರಧಾನವಾಗಿ ಬಿಟ್ಟಿದೆ. ಸದ್ಯ ಚೂಡಾಮಣಿ ಪ್ರಸಂಗದಲ್ಲಿ ಈ ಅನುಕೂಲ ನಾರಿಯರ ಪಾತ್ರಗಳೇ ಒಂದೊಂದು ಘಂಟೆ ನುಂಗಿ ನೊಣೆಯುತ್ತಿದೆ. ಬಳಸುವ ಹಾಸ್ಯದ ಸರಕುಗಳೂ ಸಹ ಒಂದಿನಿತೂ ನಗೆಯುಕ್ಕಿಸದೇ ತಾಳ್ಮೆ ಪರೀಕ್ಷಿಸುತ್ತದೆ. ಪೊರ್ಬು, ವಾಲಿಬಾಲ್, ವಿಪರೀತ ಆಂಗ್ಲ ಶಬ್ಧಗಳ ಬಳಕೆಗಳು ವಾಕರಿಕೆ ತರಿಸುತ್ತವೆ. ಹಾಸ್ಯವೆಂದು ಅಪಹಾಸ್ಯ ಮಾಡುತ್ತಾ ಘಂಟೆಯಷ್ಟು ಸಮಯ ವ್ಯರ್ಥವಾಗುತ್ತಿದೆ.
ಚೂಡಾಮಣಿ ಪ್ರಸಂಗದಲ್ಲಿ ಈ ಅನುಕೂಲ ನಾರಿಯರ ಸಂದರ್ಭ ಗಮನಾರ್ಹವಾದುದಲ್ಲ ಮಾತ್ರವಲ್ಲದೆ ಅಪ್ರಾಮುಖ್ಯ (Insignificant). ಇಂತಹ ಗಮನಾರ್ಹವಲ್ಲದ, ಅಪ್ರಮುಖ ವಿಷಯಗಳು ಗಮನಾರ್ಹವಾಗಿ, ಪ್ರಮುಖವಾಗಿ ಬದಲಾದರೆ ರಂಗಕ್ಕೆ ಅದೊಂದು ಕೊರತೆ ಮತ್ತು ಪ್ರಸಂಗದ ಆಶಯವನ್ನು ಈಡೇರಿಸಲು ಅಸಮರ್ಥವಾಗುತ್ತದೆ. ಇದು ಯಕ್ಷಗಾನವನ್ನು ರಂಗಭೂಮಿಯ ನೆಲೆಯಲ್ಲಿ ಶಿಥಿಲಗೊಳಿಸುತ್ತದೆ. ಯಕ್ಷಗಾನ ವಿಶ್ವಗಾನವಾಗುವುದು ದೂರದ ಮಾತು, ಇತರ ರಂಗಕಲೆಗಳ ಹೋಲಿಕೆಯಲ್ಲಿ ಕೆಳಸ್ಥರಕ್ಕಿಳಿಯಲ್ಪಡುತ್ತದೆ.
ಸದ್ಯ ಈ ರೀತಿ ಚೂಡಾಮಣಿ ಪ್ರಸಂಗ ಶಿಥಿಲಗೊಂಡು ಯಕ್ಷಗಾನ ರಂಗಭೂಮಿಯನ್ನೂ ಶಿಥಿಲಗೊಳಿಸುತ್ತಿದೆ. ಇದಕ್ಕೆ ಕಾರಣ ಪ್ರೇಕ್ಷಕರೋ, ಕಲಾವಿದರೋ ಅಥವಾ ಈರ್ವರೂ ಕಾರಣರೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ.
ನೆನ್ನೆ Fortune TV ಯಲ್ಲಿ Live ಪ್ರಸಾರವನ್ನು ಕಂಡ ಭ್ರಾಮರಿ ಯಕ್ಷ ವೈಭವ 2019 ರ ಚೂಡಾಮಣಿ ಪ್ರಸಂಗವನ್ನು ಇಡಿಯಾಗಿ ನೋಡಿದೆ.
ಮೊದಲೇ ಹೇಳಿದಂತೆ ಅನುಕೂಲ ನಾರಿಯರ ಸಂದರ್ಭ ಒಂದು ಘಂಟೆ ಎಳೆಯಲ್ಪಟ್ಟಿತು. ಸ್ವಲ್ಪವೂ ಹಾಸ್ಯವೆಂದು ಅನಿಸದೆ ತೀರಾ ಅಪಹಾಸ್ಯವೆಂದು ನನಗೆ ಕಂಡಿತು. ನಿರ್ವಿಕಾರ ಭಾವದಿಂದ ಶೂನ್ಯವನ್ನು ಕಾಣುವಂತೆ ಕಂಡಂತಾಯಿತು. ಇದರಿಂದ ಮುಂದಿನ ಅತ್ಯಂತ ಪ್ರಮುಖ ಭಾಗಕ್ಕೆ ಸಮಯ ತುಸು ಕಡಿಮೆಯಾಯಿತೆಂದು ಅನಿಸಿತು.
ಆದರೆ, ಸೀತಾಮಾತೆಯ ಪಾತ್ರವಂತೂ Masterpiece. ಒಂದು ಚಕಾರ ಶಬ್ಧದಷ್ಟು ಪ್ರಮಾಣದ ಋಣಾತ್ಮಕ ಅಂಶಗಳಿರದ, ಅಪಾರ ಧನಾತ್ಮಕ ಅಂಶಗಳಿದ್ದ ಅಪೂರ್ವ ಕಲಾತ್ಮಕ, ಭಾವಪೂರ್ಣ, ಅಲೌಕಿಕ ಪ್ರದರ್ಶನವಾಗಿ ಸಂಪೂರ್ಣ ಭಾವನಾಲಹರಿಯಲ್ಲಿ ಮಿಂದೆದ್ದು ಬಿಕ್ಕಿ ಬಿಕ್ಕಿ ಅತ್ತ ಅನುಭವ ನನ್ನದು.
ಸೀತಾಮಾತೆಯ ವಿರಹ, ಆಕೆಯ ವಿಹ್ವಲತೆ, ರಾವಣನ ಪ್ರೇಮನಿವೇದನೆಯ ಸಮಯದಲ್ಲಿನ ರೇಜಿಗೆಯ ಭಾವ, ಏನೂ ಮಾಡಲಾಗದ ಅಸಹಾಯಕತೆ ಈ ಎಲ್ಲಾ ಭಾವವೈವಿಧ್ಯತೆಯನ್ನು ಕಲಾವಿದ ಉನ್ನತ ರೀತಿಯಲ್ಲಿ ಭಾವದುಂಬಿ ಅಭಿವ್ಯಕ್ತಿಗೊಳಿಸಿದರು.
ಹನೂಮಂತ ಮತ್ತು ಸೀತಾಮಾತೆಯ ಸಂವಾದದ ಪ್ರದರ್ಶನವಂತೂ ಸೀತೆಯ ಪಾತ್ರ ನಿರ್ವಹಿಸಿದ ಕಲಾವಿದರ ಉತ್ಕೃಷ್ಟ ಪ್ರದರ್ಶನವಾಗಿ ನೆನಪಲ್ಲಿ ಉಳಿಯುವಂಥದ್ದು.
ಕ್ಷೇಮ | ವೇ ಹನು | ಮ ನ | ಮ್ಮವರಿಗೆ |
ರಾಮ ಲ | ಕ್ಷ್ಮಣರಾರಾ | ಜ್ಯದಲಿ ಸು | ಸ್ಥಿರವಾಗಿ
ಈ ಪದದ ಭಾವಾರ್ಥ, ಗೂಢಾರ್ಥಗಳನ್ನು ಬಹಳ ಸೊಗಸಾಗಿ ಭಾವಪೂರ್ಣವಾಗಿ ಅಭಿವ್ಯಕ್ತಿಗೊಳಿಸಿದರು. "ಕ್ಷೇಮವೇ ಹನುಮ ನಮ್ಮವರಿಗೆ? ಇದು ನಿಜವಾಗಿ ಕೇಳಬೇಕಾದ ಪ್ರಶ್ನೆಯಲ್ಲ. ಆದರೂ ಕೇಳುತ್ತಿದ್ದೇನೆ. ಸೀತೆಯಿಂದ ದೂರವಾಗಿರುವ ನನ್ನ ಪತಿ ಶ್ರೀರಾಮ ಕ್ಷೇಮವಾಗಿರಲಾರ. ನನ್ನ ಪತಿಗೆ ನನ್ನ ಮೇಲೆಷ್ಟು ಪ್ರೇಮವೆಂಬುದನ್ನು ನಾನು ಬಲ್ಲೆ. ನನಗಿಂತಲೂ ಅಧಿಕವಾಗಿ ವಿಯೋಗದ ದುಃಖದಿಂದ ನನ್ನ ಸ್ವಾಮಿ ಬಳಲುತ್ತಿರಬಹುದು" ಎಂಥಾ ಭಾವಪೂರ್ಣವೂ, ದೈವಿಕವೂ ಆದ ಮಾತುಗಳು. ಸೀತೆಯ ಮನೋಭಾವವೇನು, ವ್ಯಕ್ತಿತ್ವವೇನು ಎನ್ನುವುದು ಈ ಒಂದು ಅರ್ಥದಲ್ಲಿ ಮನದಟ್ಟಾಗಿ ಮನದುಂಬಿ ಬರುತ್ತದೆ.
ಮದನನಂ | ಗವ ಪೋಲ್ವ | ರಾಮ |
ತಮ್ಮ | ಚದುರ ಲ | ಕ್ಷ್ಮಣನು ನಿ | ಸ್ಸೀಮ ||
ಮೊದಲಿನಂ | ಗದ ಕಾಂತಿ | ಕಳವಳಿ | ಸುತ ಮತ್ತೆ |
ಹದಗುಂದ | ಲಿಲ್ಲವ | ಲ್ಲ ನೀ | ಬರುವ ದಿ |
ನದೊಳಗೆಂ | ತಿರ್ದರೆ | ಲ್ಲ ನ | ಮ್ಮವರಿಗೆ || ಈ ಪದದ ಅರ್ಥವೂ ಸಹ ಅರ್ಥಗರ್ಭಿತವಾಗಿತ್ತು. "ನನ್ನ ಪತಿ ರೂಪದಲ್ಲಿ ಮನ್ಮಥ ಸದೃಶರು. ನನ್ನ ಪತಿ ಶ್ರೀ ರಾಮ 32 ಲಕ್ಷಣಗಳಿರುವವರು. ನನ್ನ ವಿರಹದಲ್ಲಿ ತಮ್ಮ ಮೊದಲಿನ ಉತ್ಸಾಹ, ಅಂಗದ ಕಾಂತಿ ಕುಂದಿ ಸೊರಗಲಿಲ್ಲವಲ್ಲ?"
ಶ್ರೀರಾಮ ವಿಯೋಗದ ದುಃಖ, ಅದರ ಜೊತೆಯಲ್ಲಿ ಪತಿ ಶ್ರೀರಾಮನ ಮೇಲಣ ಕಾಳಜಿಯ ಅಭಿವ್ಯಕ್ತಿ ವರ್ಣಿಸಲು ಕಷ್ಟಸಾಧ್ಯ ನನಗೆ. ಒಳ್ಳೆಯ ಪ್ರತಿಭಾನ್ವಿತ ಲೇಖಕರಿಗಾದರೂ ಸಾಧ್ಯವಾದೀತೋ ಇಲ್ಲವೋ?
ಸೀತೆಯನ್ನು ಕಂಡು ಮಾತಾಡಿಸಿ ಬಂದಿದ್ದರ ದ್ಯೋತಕವಾಗಿ ಏನನ್ನಾದರೂ ನೀಡೆಂದು ಹನೂಮಂತ ಕೇಳಿಕೊಂಡಾಗ ತನ್ನಲ್ಲುಳಿದುಕೊಂಡಿದ್ದ ಚೂಡಾಮಣಿಯನ್ನು ಕೊಡುವ ಸಂದರ್ಭದ ಅರ್ಥವೂ ವಿದ್ವತ್ಪೂರ್ಣವಾಗಿತ್ತು.
ಚೂಡಾಮಣಿ ಜನಕ ಮಹಾರಾಜನಿಗೆ ದೊರಕಿದ್ದು ಹೇಗೆ? ಅದನ್ನು ತನ್ನ ಮತ್ತು ಶ್ರೀರಾಮನ ವಿವಾಹದ ಸಮಯದಲ್ಲಿ ತಂದೆ ಶ್ರೀರಾಮನಿಗೆ ಕೊಟ್ಟಿರುವ ಹಿನ್ನೆಲೆ. ಪತಿ ಶ್ರೀರಾಮ ಆ ಚೂಡಾಮಣಿಯನ್ನು ತನಗಿತ್ತ ವಿಚಾರದ ಒಳಹೂರಣವನ್ನು ವಿವರಿಸಿದರು.
ಏಸುದಿನ | ಬೇ | ಕೆನ್ನ ಪ್ರಾ | ಣೇಶನ ಕಾಂ | ಬುದಕಿನ್ನು |
ಬೇಸರಿಕೆ | ಯೆಂಬುದೇನ | ಹೇಳಲಿ | ಎಂತು | ತಾಳಲಿ |
ಯಕ್ಷಗಾನದ ಮಹಾನ್ ಕವಿ ಕುಂಬಳೆಯ ಪಾರ್ತಿಸುಬ್ಬ ಅದೆಷ್ಟು ಸೊಗಸಾಗಿ ಸೀತಾರಾಮರ ಪ್ರೇಮವನ್ನು ಅರ್ಥ ಮಾಡಿಕೊಂಡು ಈ ಪದದಲ್ಲಿ ಬಹು ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಆ ಪದದ ಭಾವವನ್ನು ಅಷ್ಟೇ ಸೊಗಸಾಗಿ ಅರ್ಥಮಾಡಿಕೊಂಡು ಅಭಿನಯ ಮತ್ತು ಮಾತಿನ ಮೂಲಕ ಸೀತೆಯ ಪಾತ್ರಧಾರಿ ಕಲಾವಿದರು ಅನಾವರಣಗೊಳಿಸಿದರು.
ಸೀತಾಮಾತೆಯ ಪಾತ್ರವನ್ನು ನಿರ್ವಹಿಸಿದ ಕಲಾವಿದರ ಒಟ್ಟೂ ಪ್ರಸ್ತುತಿ ಪಾತ್ರೋಚಿತವಾಗಿ, ಕಲೋಚಿತವಾಗಿದ್ದು ಪ್ರಸಂಗದ ಆಶಯವನ್ನು ಪರಿಣಾಮಕಾರಿಯಾಗಿ ನೆರವೇರಿಸಿತು.
ಚೂಡಾಮಣಿಯನ್ನು ಹನುಮಂತನಿಗಿತ್ತ ಬಳಿಕ ಸೀತಾಮಾತೆ ಕೇಳುವ ಒಂದೇ ಒಂದೇ ಮಾತು ಏನೆಂದರೆ ನನ್ನ ರಾಮನನ್ನು ನಾನು ಯಾವಾಗ ಕಾಣುತ್ತೇನೆ ಎಂದು ಮಾತ್ರ. ಆಕೆಗೆ ರಾವಣನ ಸೆರೆಯಲ್ಲಿ ತಾನಿರುವ ಯೋಚನೆಯಿಲ್ಲ. ಎಂಥಾ ಪವಿತ್ರ, ದೈವಿಕ ದಾಂಪತ್ಯವದು.
*ಸೀತಾಮಾತೆಯ ಪಾತ್ರಧಾರಿಯ ವಿಶೇಷಗಳು :*
*1)* ಅನುಕೂಲ ನಾರಿಯರ ವೈವಿಧ್ಯಮಯವಾದ ಆದರೆ ಅವಶ್ಯವಿರದ ಒಂದು ಘಂಟೆ ಸಮಯದ ಚೇಷ್ಟೆಗಳ ಸಂದರ್ಭದುದ್ದಕ್ಕೂ ಸಹ ಸೀತೆಯ ಪಾತ್ರಧಾರಿ ಶ್ರೀರಾಮನ ವಿರಹದ ಭಾವವನ್ನು, ಬೇಸರ, ಬೇಗುದಿಯನ್ನು ವ್ಯಕ್ತಪಡಿಸುತ್ತ ಪಾತ್ರದಲ್ಲಿಯೇ ತನ್ಮಯರಾಗಿದ್ದರು. ಒಂದೆಳೆಯಷ್ಟರ ಭಾವವ್ಯತ್ಯಾಸ ಕಂಡು ಬರಲಿಲ್ಲ.
*2)* ನಾನು Live ನೋಡುತ್ತಿದ್ದೆನಷ್ಟೆ. ಅನುಕೂಲ ನಾರಿಯರ ಸಂದರ್ಭದಲ್ಲಿ Camera ಸೀತೆಯ ಪಾತ್ರಧಾರಿಯೆಡೆ Focus ಮಾಡುತ್ತಿದ್ದಾಗಲೂ ಭಾವವ್ಯತ್ಯಾಸ ಕಂಡುಬರಲಿಲ್ಲ. ಶೈಕ್ಷಣಿಕ ಹಿನ್ನೆಲೆಯಿರುವ ಹಾಗೂ ತಂತ್ರಜ್ಞಾನಗಳ ಕುರಿತಾದ ಮಾಹಿತಿ, ಎಚ್ಚರವಿರುವ ಕಲಾವಿದನಾದವನಿಗೆ ಮಾತ್ರ ಇಂತಹ ಪ್ರದರ್ಶನ ಸಾಧ್ಯ. ಇದು ಒಂದು ತಪಸ್ಸು.
*3)* ಈ ಕಲಾವಿದರು ತಾವು ಮಾಡುವ ಪಾತ್ರದ ಕುರಿತಾಗಿ ಶಿಸ್ತುಬದ್ಧವಾದ ಅಧ್ಯಯನವನ್ನು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಪಾತ್ರ ಪ್ರಸ್ತುತಿಯ ಶಿಸ್ತಿನ ಬಗ್ಗೆ, ಅಚ್ಚುಕಟ್ಟುತನದ ಬಗ್ಗೆ ಕಟು ಎಚ್ಚರ ವಹಿಸುತ್ತಾರೆ ಎನ್ನುವುದು ಕಲಾವಿದನ ಮತ್ತು ಕಲೆಯ ನೆಲೆಯಿಂದ ಆಶಾದಾಯಕ ಬೆಳವಣಿಗೆ.
ಇಡಿಯ ಚೂಡಾಮಣಿ ಪ್ರಸಂಗದಲ್ಲಿ ಸೀತಾಮಾತೆಯ ಪಾತ್ರ ಅಚ್ಚೊತ್ತಿ ನಿಂತಿತು. ಈ ಸೀತೆಯ ಪಾತ್ರಪೋಷಣೆಯಲ್ಲಿ ಸೀತೆ ಪಾತ್ರಧಾರಿಯ ಪಾತ್ರ ಹಿರಿದು. ಆದರೆ ಸುಂದರರಾವಣ ಮತ್ತು ಹನೂಮಂತ ಪಾತ್ರಧಾರಿಗಳ ಪಾತ್ರ ಪ್ರಸ್ತುತಿ  ಪೋಷಕವಾಗಿ ಪರಿಣಮಿಸಿದ್ದೂ ಹೌದು.

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನ

*ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನ*                               
  
        
(All India council for technical Education)
          (AITCE) ನಡೆಯುವ ಕೌಶಲ್ಯ ಅಭಿವೃದ್ಧಿ ತರಬೇತಿ.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯಿಂದ
ವಿದ್ಯಾರ್ಹತೆ: 8ನೇ ತರಗತಿಯಿಂದ ಪ್ರಾರಂಭಗೊಂಡು BE, ಡಿಪ್ಲೊಮಾ, ಯಾವುದೇ ಡಿಗ್ರಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು, ಶಿಕ್ಷಣವನ್ನು ಅರ್ಧದಲ್ಲಿ ತ್ಯಜಿಸಿದವರು ಕೂಡಾ.
ವಯಸ್ಸು 18ರಿಂದ ಮೇಲ್ಪಟ್ಟು, ವಯೋಮಿತಿ ಇಲ್ಲ.
NSDC ಸಂಸ್ಥೆ ಪಠ್ಯ ಕ್ರಮವನ್ನು(Syllabus) ಜೋಡಣೆ(Frame) ಮಾಡಿರುತ್ತಾರೆ. ಕೆಲವು ಕೋರ್ಸುಗಳು 250, 350, ಅಥವಾ 400 ಘಂಟೆಗಳ ಅವಧಿಯದ್ದಾಗಿರುತ್ತವೆ.
ಕೋರ್ಸ್: AC ಮೆಕ್ಯಾನಿಕ್, ಮೋಟಾರ್ ಮೆಕ್ಯಾನಿಕ್(Fitter), ಪ್ಲಂಬರ್, CC TV ನಿರ್ವಹಣೆ, TV, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ರಿಪೇರಿ ಕೆಲಸ, ಘನ ವಾಹನ ಚಾಲನೆ(ಜೆಸಿಬಿ,ಟಿಪ್ಪರ್,ಬುಲ್ಡೋಜರ್), ಹೊಲಿಗೆ(Tailoring), ಬ್ಯುಟೀಷಿಯನ್(ಬ್ಯೂಟಿಪಾರ್ಲರ್), ಬೇಕರಿ, ಮಿಡ್ ವೈಫ್ ಇತ್ಯಾದಿ ಮುನ್ನೂರಕ್ಕೂ ಹೆಚ್ಚು ಕೋರ್ಸುಗಳು.
ತರಬೇತಿ ಕೊಡುವ ಸಂಸ್ಥೆ: ವಿವೇಕಾನಂದ ತಾಂತ್ರಿಕ ಶಿಕ್ಷಣ(Polytechnic) ಕಾಲೇಜು ಪುತ್ತೂರು.
ಬೇಕಾಗುವ ದಾಖಲೆಗಳು: ಆಧಾರ್ ಕಾರ್ಡ್, ಎಜ್ಯುಕೇಷನ್ ಸರ್ಟಿಫಿಕೇಟ್, 8ನೇ ತರಗತಿಯಾದಲ್ಲಿ ಶಾಲೆಯಿಂದ TC ಹಾಗೂ ಫೋಟೋಗಳು.
ಯಾವುದೇ ಶುಲ್ಕವಿಲ್ಲ, ಉಚಿತ ಕೋರ್ಸುಗಳು.
ಪ್ರಯೋಜನ: ಸ್ವ ಉದ್ಯೋಗ, ಸರ್ಕಾರಿ ಸಂಸ್ಥೆಯಿಂದ ಪ್ರಮಾಣ ಪತ್ರ, ಸರ್ಕಾರಿ ಹುದ್ದೆಗಳಿಗೆ ಅರ್ಹತೆ ಹಾಗೂ ಆದ್ಯತೆ.
ಪ್ರಾಯೋಗಿಕ ಮತ್ತು ಲಿಖಿತ(Practical & Theory) ಪರೀಕ್ಷೆಯನ್ನು NSDC ಸಂಸ್ಥೆ ನೋಡಿಕೊಳ್ಳುತ್ತದೆ.
ಕೋರ್ಸುಗಳ ಸಮಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು(ತಮ್ಮ ಕೆಲಸಗಳನ್ನು ಮಾಡಿಕೊಂಡು ಸಂಜೆ ಹೊತ್ತು ಅಥವಾ ಶನಿವಾರ, ಭಾನುವಾರದಂದು ಕೂಡಾ ಈ ತರಬೇತಿಯನ್ನು ಪಡೆದುಕೊಳ್ಳಬಹುದು).
ಹೆಚ್ಚಿನ ಮಾಹಿತಿಗೆ ಕೂಡಲೇ ಸಂಪರ್ಕಿಸಿ: ಶ್ರೀ ಗೋಪಿನಾಥ್ ಶೆಟ್ಟಿ, ಪ್ರಾಂಶುಪಾಲರು ವಿವೇಕಾನಂದ ತಾಂತ್ರಿಕ ಶಿಕ್ಷಣ(polytechnic) ಕಾಲೇಜು, ಪುತ್ತೂರು.
ಸಂಪರ್ಕ ಸಂಖ್ಯೆ: *9448482275*
                      please subscribe to my youtube channel- https://www.youtube.com/channel/UC8JeLpTTF9RiIlI5LrjisDA?sub_confirmation=1

Friday, 6 September 2019

A brief information about Dr B N Rao,Indian Jurist


ನಿಮಗೆ, ನಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ವ್ಯಕ್ತಿ *"ಬಿ.ಎನ್. ರಾವ್"* ರವರ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರುಕಟ್ಟೆಯಲ್ಲಿ, ಹೊಟೆಲುಗಳಲ್ಲಿ ಅಥವಾ ಇನ್ನಾವುದೇ ಸ್ಥಳಗಳಲ್ಲಿ, ಯಾರನ್ನು ಬೇಕಾದರೂ ಕೇಳಿ; ಯಾರಿಗೂ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ. ಇವರ ಬಗ್ಗೆ ಅವರೆಲ್ಲೂ ಓದಿಲ್ಲವೆಂದು ಧೈರ್ಯದಿಂದ ಷರತ್ತನ್ನೂ ಕಟ್ಟಬಹುದು ! ಈಗ ಅವರ ಬಗ್ಗೆ ಕೇಳಿ.

ಇವರ ಹೆಸರಿನ, ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಎಂದು. ಬೆನಗಲ್, ಕಾರ್ಕಳ ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಈ ಹಳ್ಳಿಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಮನೆತನದಲ್ಲಿ ೧೮೮೭ರ ಫೆಬ್ರವರಿ ೨೬ರಂದು ಹುಟ್ಟಿದ ಮಗು, ನರಸಿಂಗ.

ಈ ವಂಶದ ಜನ ಪಾರ್ಸಿಗಳಿಗಿಂತಲೂ ಅಲ್ಪಸಂಖ್ಯಾತರು. ಇಡೀ ಜಗತ್ತಿನಲ್ಲಿ 30 ಸಾವಿರ ಚಿತ್ರಾಪುರ ಬ್ರಾಹ್ಮಣರಿದ್ದರೆ ಹೆಚ್ಚು. ಆದರೆ ಜಗತ್ತಿನಲ್ಲಿ ಬಹಳ ಹೆಸರು ಮಾಡಿದ ಇದೇ ಪಂಗಡದ ಮಹಾಮಹಿಮರನ್ನು ಪರಿಚಯಿಸಿಕೊಳ್ಳೋಣ : ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು, ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಗೌರೀಶ ಕಾಯ್ಕಿಣಿ, ಜಯಂತ್ ಕಾಯ್ಕಿಣಿ, ಪ್ರಕಾಶ್ ಪಡುಕೋಣೆ, ಸಂತೋಷ ಕುಮಾರ ಗುಲ್ವಾಡಿ, ಗಿರೀಶ ಕಾರ್ನಾಡ್.
ನರಸಿಂಗರಾವರ ತಂದೆ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗರಾಯರು ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವರು ೧೯೦೧ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಬಿಟ್ಟರು. ಅಲ್ಲಿಂದ ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದೂ ಆಯಿತು. ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ರಾಯರು ಇಂಗ್ಲೆಂಡಿಗೆ ಹೋದರು. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ ೧೯೦೯ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ ನರಸಿಂಗರಾಯರು ಆ ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್-ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿ ಕೊಂಡಿತು. ನಂತರ ಬ್ರಿಟಿಷ್ ಸರಕಾರವು ರಾಯರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡಬೇಕೆಂದು ಕೇಳಿಕೊಂಡಿತು. ನರಸಿಂಗರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗ ರಾಯರ ದೂರದೃಷ್ಟಿ ಎನ್ನಲೇಬೇಕು.
ನದಿನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀ೦ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. ೧೯೪೪ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು! ೧೯೪೬ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು ೨೪೩ ವಿಧಿಗಳೂ ೧೩ ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ರಾಯರು ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು. ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ ೩೧೫ವಿಧಿಗಳೂ ೮ ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ ೩೯೫ಕ್ಕೆ ಏರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಪೂರ್ತಿ ಬರೆದವರೇ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಈಗ ಬೆಳೆದುಬಂದಿದೆ. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿ ಆಧಾರದ ಮೇಲೆ ಓಲೈಸಿಕೊಂಡು ಬಂದ ರಾಜಕೀಯ ಪಕ್ಷಗಳೇ ಈ ಮಿಥ್ಯ ಚರಿತ್ರೆಗೆ ನೇರ ಹೊಣೆ ಎನ್ನಬಹುದು. ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿಕೊಟ್ಟ ಮೇಧಾವಿ, ಯಾರಿಗೂ ನೆನಪಾಗಿಲ್ಲವೆಂದರೆ ಅದು ಈ ಗಣರಾಜ್ಯದ ದುರಂತ !
ನರಸಿಂಗರಾಯರು, ಸಂವಿಧಾನದ ಕೆಲಸ ಮುಗಿಸಿದ ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು ಕೇಳಿ ಕೊಂಡಿತು ! ಆ ಕೆಲಸವನ್ನೂ ಪೂರೈಸಿಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ ೧೯೫೦ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿಬಂದಿತ್ತು. ಆದರೆ ಆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ, ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ. ೧೯೫೨ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ ನ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಆ ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ.೧೯೫೩ರ ನವೆಂಬರ್ ೩೦ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ ನಲ್ಲಿ ತನ್ನ ೬೬ನೆಯ ವಯಸ್ಸಿನಲ್ಲಿ ನಿಧನರಾದರು. ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ಸಹೋದರರಾದ ಬಿ. ರಾಮರಾವರವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆಯ ಸಹೋದರ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು. ಜೊತೆಗೆ ಸಂಸದರೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು. ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಊರಿನಿಂದ ವಿಶ್ವಸಂಸ್ಥೆ, ಬಅಂತರರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ ನರಸಿಂಗರಾಯರದು ! ಆದರೆ, ನಮ್ಮ ಕರ್ನಾಟಕದ ಈ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರು-ನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನ-ಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ...
   please subscribe to my youtube channel-
 

Sunday, 1 September 2019

" ಶ್ರೀದೇವಿಮಹಾತ್ಮೆ " ಪ್ರಸಂಗದ ಇತಿಹಾಸ


" ಶ್ರೀದೇವಿಮಹಾತ್ಮೆ " ಪ್ರಥಮವಾಗಿ ಎಲ್ಲಿ ಪ್ರದರ್ಶಿತವಾಗಿತ್ತು ?

ಸುಮಾರು ೧೯೩೦ರಲ್ಲಿ , ಕಾಸರಗೋಡು ಸಮೀಪ" ಕೊರಕ್ಕೋಡು " ಎಂಬಲ್ಲಿ ಕೊರಕ್ಕೋಡು ಎಂಬ ಮೇಳವಿತ್ತು. ಆ ಮೇಳದ ಯಜಮಾನರಾದ ಶ್ರೀ ದೇವಪ್ಪ ಮೇಸ್ತ್ರಿಯವರಿಗೆ ಏಳು ದಿನಗಳ ಕಾಲ " ಶ್ರೀದೇವಿಮಹಾತ್ಮೆ " ಆಟ ಆಡಿಸಬೇಕೆಂದು ಇಚ್ಛೆಯಾಯಿತು.
ಆದರೆ , " ಶ್ರೀದೇವಿಮಹಾತ್ಮೆ " ಪ್ರಸಂಗ ಪುಸ್ತಕ ಬರೆದಿರದ ಕಾಲವದು. ಆ ಕಾರಣಕ್ಕಾಗಿ ದೇವಪ್ಪ ಮೇಸ್ತ್ರಿಗಳು ಆ ಕಾಲದ ಸುಪ್ರಸಿಧ್ಧ ಭಾಗವತರೂ , ಆಶುಕವಿಗಳೂ ಆದ ಶ್ರೀ ಮಾಂಬಾಡಿ ನಾರಾಯಣ ಭಾಗವತರಲ್ಲಿ ಬಂದು" ನೀವೇ ಈ ಪ್ರಸಂಗ ಮುನ್ನಡೆಸಿ ಕೊಡಬೇಕು " ಎಂದು ಕೇಳಿಕೊಂಡರು.ಮಾಂಬಾಡಿಯವರೂ , ಶ್ರೀದೇವಿಯ ಸೇವೆ ಎಂದು ಒಪ್ಪಿದರು. ಆ ಕಾಲದಲ್ಲಿ ಭಾಗವತರಾಗಿ ಮೆರೆದಿದ್ದ ಶ್ರೀ ಜತ್ತಿ ಈಶ್ವರ ಭಾಗವತರಿಂದ ದೇವಿಮಹಾತ್ಮೆಯ ಕಥೆ ಕೇಳಿದ ಮಾಂಬಾಡಿಯವರು ಸ್ವಂತ ಕಲ್ಪನೆ ಯಿಂದ ಪದಗಳನ್ನು ಬರೆದರು .
ಏಳು ದಿನಗಳ " ಶ್ರೀದೇವಿಮಹಾತ್ಮೆ " ಪ್ರಾರಂಭವಾಯಿತು. ಮೊದಲ ದಿನ ಮೇಳದ ಭಾಗವತರಾದ ಪೆರಿಯಪ್ಪಾಡಿ ಪರಮೇಶ್ವರ ಭಾಗವತರು ಹಾಡಿದರು. ನಂತರದ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರೇ ಪ್ರಸಂಗವನ್ನು ಮುನ್ನಡೆಸಿದರು. ಏಳೂ ದಿನಗಳ ಕಾಲ ಮಾಂಬಾಡಿಯವರು ಪರಿಶುಧ್ಧ ವೃತ ನಿಯಮದಲ್ಲಿದ್ದರಲ್ಲದೇ , ಎಲ್ಲಾ ಕಲಾವಿದರೂ , ಅದೇ ಶುಧ್ಧ ನಿಯಮ ಪಾಲಿಸಬೇಕೆಂದು ಆಜ್ಞಾಪಿಸಿದ್ದರು .ಹೀಗೆ , ಪ್ರಪ್ರಥಮವಾಗಿ " ಶ್ರೀದೇವಿಮಹಾತ್ಮೆ " ಕೊರಕ್ಕೋಡಿನಲ್ಲಿ ಏಳು ದಿನಗಳ ಕಾಲ ದಿನಕ್ಕೊಂದು ಆಖ್ಯಾನದಂತೆ , ಪ್ರದರ್ಶನಗೊಂಡಿತು. ಜತ್ತಿ ಈಶ್ವರ ಭಾಗವತರು ಏಳೂ ದಿನವೂ ತಮ್ಮ ಧರ್ಮಪತ್ನಿಯೊಂದಿಗೆ ಎದುರಿನ ಆಸನದಲ್ಲಿ ಪ್ರೇಕ್ಷಕರಾಗಿ ಪ್ರದರ್ಶನ ನೋಡಿ ಪ್ರೋತ್ಸಾಹಿಸಿದ್ದರು .ಅಂದು " ಶ್ರೀದೇವಿ " ಯ ಪಾತ್ರ ನಿರ್ವಹಿಸಿದವರು ಅಂದಿನ ಕಾಲದ ಸುಪ್ರಸಿಧ್ಧಕಲಾವಿದರಾಗಿದ್ದ
ಶ್ರೀ ಪಾಣಾಜೆ ಗಣಪತಿ ಭಟ್ಟರು ( ಯಕ್ಷರಂಗದ ಪ್ರಪ್ರಥಮ ಶ್ರೀದೇವಿ ಪಾತ್ರಧಾರಿ ) , ಮಹಿಷಾಸುರನಾಗಿ ಕಾಣಿಸಿಕೊಂಡವರು ಸುಪ್ರಸಿಧ್ಧ ಬಣ್ಣದ ವೇಷಧಾರಿಯಾಗಿದ್ದ " ಬಣ್ಣದ ಕುಂಞ "ರವರು ( ಪ್ರಪ್ರಥಮ ಮಹಿಷ ಪಾತ್ರಧಾರಿ )ಹೀಗೆ " ಪ್ರಪ್ರಥಮ ಶ್ರೀದೇವಿ ಮಹಾತ್ಮೆ " ಪ್ರಸಂಗ ಏಳುದಿನಗಳ ಕಾಲ ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು .ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಜರಗಿದ " ಶ್ರೀ ದೇವಿ ಮಹಾತ್ಮೆ " ಯ ವಿಷಯ ಆಗಿನ ಶ್ರೀ ಕ್ಷೇತ್ರ ಕಟೀಲಿನ ಮೊಕ್ತೇಸರರಾದ ಶ್ರೀಧರ ಶೆಟ್ಟಿಯವರು ಅರಿತು, ಅವರೂ ಕಟೀಲು ಮೇಳದ ವತಿಯಿಂದ " ಶ್ರೀದೇವಿಮಹಾತ್ಮೆ " ಆಟ ಆಡಿಸಲು ನಿರ್ಧರಿಸಿದರು .ದಿ. ಕಲ್ಲಾಡಿ ಕೊರಗ ಶೆಟ್ಟರು ಶ್ರೀಕ್ಷೇತ್ರದ ಮೇಳದ ವ್ಯವಸ್ತಾಪಕತ್ವ ವಹಿಸಿದ್ದ ಕಾಲವದು .ಶ್ರೀಧರ ಶೆಟ್ಟರ ಮುತುವರ್ಜಿಯಲ್ಲಿ , ಅರ್ಚಕರಾದ ಅಸ್ರಣ್ಣ ಬಂಧುಗಳ ಪ್ರೋತ್ಸಾಹದೊಂದಿಗೆ ೧೯೪೧ ರಲ್ಲಿ , ಕಿನ್ನಿಗೋಳಿಯಲ್ಲಿ ೫ ದಿವಸಗಳ ಕಾಲ " ಶ್ರೀದೇವಿಮಾತ್ಮೆ " ಆಡಿಸಿದರು .
ಆದರೆ , ಮೇಳದ ಭಾಗವತರು ಆಡಿಸಲು ಹಿಂಜರಿದಾಗ ಮಾಂಬಾಡಿ ನಾರಾಯಣ ಭಾಗವತರನ್ನೇ ಕರೆಸಿ ಆಟವನ್ನು ಪ್ರದರ್ಶಿಸಿದರು. ಮಾಂಬಾಡಿಯವರು " ಶ್ರೀಸಪ್ತಶತಿ ಗೃಂಥ " ವನ್ನು ಆಧರಿಸಿ " ಶ್ರೀದೇವಿ ಮಹಾತ್ಮೆ " ಆಟವನ್ನು ಆಡಿಸಿದ್ದರು . ಈಗಿನ " ಶ್ರೀದೇವಿಮಹಾತ್ಮೆ " ತ್ರಿಮೂರ್ತಿಗಳ ಹುಟ್ಟಿನೊಂದಿಗೆ ಕಥೆ ಪ್ರಾರಂಭವಾಗುವದು .( ಇದು ಬಲಿಪ ಭಾಗವತರ ಪ್ರಸಂಗ ) ಆದರೆ , ಅಂದು ಮಾಂಬಾಡಿಯವರ ಐದು ದಿನಗಳ ಶ್ರೀದೇವಿಮಹಾತ್ಮೆಯು ಸುರಥನ ಒಡ್ಡೋಲಗದಿಂದ ಪ್ರಾರಂಭವಾಗುತ್ತಿತ್ತು.
ಅಂದು " ಶ್ರೀದೇವಿ " ಯಾಗಿ ಮಿಂಚಿದವರು ಶ್ರೀ ಕಡಂದೇಲು ಪುರುಷೋತ್ತಮ ಭಟ್ಟರು . ನಂತರದ ದಿನಗಳಲ್ಲಿ ಕಡಂದೇಲುರವರೇ ಶ್ರೀದೇವಿಯಾಗಿ ವಿಜೃಂಭಿಸಿದ್ದುದು ಈಗ ಇತಿಹಾಸ.ಅಂದು ಐದು ದಿನಗಳ" ಶ್ರೀದೇವಿಮಹಾತ್ಮೆ " ಯ ಕೊನೆಯ ದಿನ " ಅರುಣಾಸುರ ವಧೆ " ಯನ್ನೂ ಸೇರಿಸಿದ್ದರು .ಈ ಐದೂ ದಿನಗಳ ಕಾಲ ಮಾಂಬಾಡಿ ಭಾಗವತರು ಪರಿಶುಧ್ಧ ವೃತನಿಷ್ಟರಾಗಿ , ಒಪ್ಪೊತ್ತಿನ ಊಟ ಮಾತ್ರ ಮಾಡಿ ಹಗಲಿನಲ್ಲಿ ಕಟೀಲಿನ ಶ್ರೀದೇವಿಯ ಪರಮ ಪವಿತ್ರ ಸನ್ನಿಧಾನದಲ್ಲಿ ಏಕಾಂತವಾಗಿ ಧ್ಯಾನ ಮಾಡುತ್ತಿದ್ದರಂತೆ . ಕಡಂದೇಲು ಹಾಗೂ ಇತರ ಕಲಾವಿದರೂ , ವೃತಧಾರಿಗಳಾಗಿ ಪಾತ್ರ ನಿರ್ವಹಿಸಿದ್ದರು. ಈ ಐದು ದಿವಸಗಳ
" ಶ್ರೀದೇವಿಮಹಾತ್ಮೆ " ಯಜ್ಞಫಲವನ್ನು ಕೊಟ್ಟಿತ್ತು .ಅಂದು, ಕಿನ್ನಿಗೋಳಿಯಲ್ಲಿ ಚೌಕಿಯಾಗಿ ಮೇಳದ " ಶ್ರೀದೇವರು " ವಿರಾಜಮಾನರಾದ ಅದೇ ಸ್ತಳ ಇಂದು " ಶ್ರೀ ರಾಮಮಂದಿರ " ವಾಗಿ ಕಂಗೊಳಿಸುತ್ತಿರುವದು " ಶ್ರೀದೇವಿಮಹಾತ್ಮೆ " ಪ್ರಸಂಗದ
" ಮಹಾತ್ಮೆ " ಯಿಂದಲೇ ಎಂಬುವುದು ಭಕ್ತರ ಅಂಬೋಣ .
   please subscribe to my youtube channel- https://www.youtube.com/channel/UC8JeLpTTF9RiIlI5LrjisDA?sub_confirmation=1

Tuesday, 9 April 2019

GEETHA SAHITHYA SAMBRAMA

One of the best program of geetha sahitya sambrama by vittal nayak and team held at balnadu ullalthi temple puttur. full video is given below.

Part 1 →

best program of geetha sahitya sambrama by vittal nayak and team held at balnadu ullalthi temple puttur.
__________________________________________________________________________

Part 2 →   

2nd part of geetha sahitya sambrama programme held at balnadu.                            
__________________________________________________________________________
About artists: vittal nayak
                      suhas hebbar
                      raviraj odiyoor
                      tejas kallugundi    please subscribe to my youtube channel- https://www.youtube.com/channel/UC8JeLpTTF9RiIlI5LrjisDA?sub_confirmation=1