*ಯಕ್ಷಗಾನ ಪ್ರಸಂಗ ಚೂಡಾಮಣಿ*
ಯಕ್ಷಗಾನ ಪ್ರಸಂಗ ಚೂಡಾಮಣಿಯ ಮುಖ್ಯ ಪಾತ್ರಗಳು ನಿಜವಾಗಿ ಹನೂಮಂತ, ರಾವಣ ಮತ್ತು ಸೀತೆ.
ಈ ಪ್ರಸಂಗದ ರಸೋತ್ಪತ್ತಿಯ ಅಂಶಗಳು ಸುಂದರ ರಾವಣ ಅಶೋಕವನದಲ್ಲಿರುವ ಸೀತೆಯ ಮನ ಒಲಿಸಲೆತ್ನಿಸುವ ಏಕಮುಖ ಶೃಂಗಾರ ಮತ್ತು ತಾನು ಶ್ರೀರಾಮನ ದೂತ ಹನೂಮಂತ ಹಾಗೂ ಸೀತೆಯನ್ನು ಬಿಡಿಸಿಕೊಂಡು ಹೋಗುವ ಕೈಂಕರ್ಯದಲ್ಲಿ ಶ್ರೀರಾಮನೇ ಆದಿಯಾಗಿ ಕಪಿವೀರರ ತತ್ಪರತೆ, ಸೀತಾವಿಯೋಗ ಶ್ರೀರಾಮನ ಮೇಲೆ ಬೀರಿದ ಪರಿಣಾಮಗಳ ವಿವರಣೆ, ಕೊನೆಗೆ ಯಾವ ಮಾತುಗಳ ಮೇಲೂ ಪೂರ್ಣ ನಂಬುಗೆ ಮೂಡದ ಸೀತೆಗೆ ಶ್ರೀರಾಮ ಕೊಟ್ಟಿದ್ದ ಕೆಲ ಆಭರಣಗಳನ್ನು ಕೊಟ್ಟು, ಸೀತೆಯನ್ನು ಕಂಡು ಮಾತಾಡಿಸಿ ಬಂದಿದ್ದರ ದ್ಯೋತಕವಾಗಿ ಆಕೆಯಿಂದ ಚೂಡಾಮಣಿಯನ್ನು ಪಡೆದುಕೊಳ್ಳುವುದು. ಇದು ಕರುಣರಸವನ್ನು ಅಭಿವ್ಯಕ್ತಿಗೊಳಿಸಬೇಕು.
ಕಟೀಲು ಮೇಳಗಳಲ್ಲಿ ಕೆಲ ವರ್ಷಗಳ ಹಿಂದೆ ನೋಡಿದ್ದ ಚೂಡಾಮಣಿ ಪ್ರಸಂಗ ಮತ್ತು ಕೆಲ ವರ್ಷಗಳ ಹಿಂದೆ ಕುರುಡಪದವಿನಲ್ಲಿ ಮಾತನಾಡುವ ಭಾಗವತರೆನ್ನುವ ಖ್ಯಾತಿಯ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರ ಸೀತಾ ಪಾತ್ರದಲ್ಲಿ ನೋಡಿದ ಚೂಡಾಮಣಿ ಪ್ರಸಂಗವೇ ಕೊನೆಯ ಉತ್ತಮ ಪ್ರದರ್ಶನ.
ಆ ಬಳಿಕ ಕೆಲ ಚೂಡಾಮಣಿ ಪ್ರಸಂಗಗಳನ್ನು ನೋಡಿದರೆ ಬಹಳ ವಿಚಿತ್ರ. ಸದ್ಯ ಚೂಡಾಮಣಿಯಲ್ಲಿ ಅನುಕೂಲ ನಾರಿಯರೇ ಮುಖ್ಯ ಪಾತ್ರವಾಗಿ ಹೋಗಿದೆ ಮಾತ್ರವಲ್ಲದೆ ಹಾಸ್ಯರಸವೇ ಪ್ರಧಾನವಾಗಿ ಬಿಟ್ಟಿದೆ. ಸದ್ಯ ಚೂಡಾಮಣಿ ಪ್ರಸಂಗದಲ್ಲಿ ಈ ಅನುಕೂಲ ನಾರಿಯರ ಪಾತ್ರಗಳೇ ಒಂದೊಂದು ಘಂಟೆ ನುಂಗಿ ನೊಣೆಯುತ್ತಿದೆ. ಬಳಸುವ ಹಾಸ್ಯದ ಸರಕುಗಳೂ ಸಹ ಒಂದಿನಿತೂ ನಗೆಯುಕ್ಕಿಸದೇ ತಾಳ್ಮೆ ಪರೀಕ್ಷಿಸುತ್ತದೆ. ಪೊರ್ಬು, ವಾಲಿಬಾಲ್, ವಿಪರೀತ ಆಂಗ್ಲ ಶಬ್ಧಗಳ ಬಳಕೆಗಳು ವಾಕರಿಕೆ ತರಿಸುತ್ತವೆ. ಹಾಸ್ಯವೆಂದು ಅಪಹಾಸ್ಯ ಮಾಡುತ್ತಾ ಘಂಟೆಯಷ್ಟು ಸಮಯ ವ್ಯರ್ಥವಾಗುತ್ತಿದೆ.
ಚೂಡಾಮಣಿ ಪ್ರಸಂಗದಲ್ಲಿ ಈ ಅನುಕೂಲ ನಾರಿಯರ ಸಂದರ್ಭ ಗಮನಾರ್ಹವಾದುದಲ್ಲ ಮಾತ್ರವಲ್ಲದೆ ಅಪ್ರಾಮುಖ್ಯ (Insignificant). ಇಂತಹ ಗಮನಾರ್ಹವಲ್ಲದ, ಅಪ್ರಮುಖ ವಿಷಯಗಳು ಗಮನಾರ್ಹವಾಗಿ, ಪ್ರಮುಖವಾಗಿ ಬದಲಾದರೆ ರಂಗಕ್ಕೆ ಅದೊಂದು ಕೊರತೆ ಮತ್ತು ಪ್ರಸಂಗದ ಆಶಯವನ್ನು ಈಡೇರಿಸಲು ಅಸಮರ್ಥವಾಗುತ್ತದೆ. ಇದು ಯಕ್ಷಗಾನವನ್ನು ರಂಗಭೂಮಿಯ ನೆಲೆಯಲ್ಲಿ ಶಿಥಿಲಗೊಳಿಸುತ್ತದೆ. ಯಕ್ಷಗಾನ ವಿಶ್ವಗಾನವಾಗುವುದು ದೂರದ ಮಾತು, ಇತರ ರಂಗಕಲೆಗಳ ಹೋಲಿಕೆಯಲ್ಲಿ ಕೆಳಸ್ಥರಕ್ಕಿಳಿಯಲ್ಪಡುತ್ತದೆ.
ಸದ್ಯ ಈ ರೀತಿ ಚೂಡಾಮಣಿ ಪ್ರಸಂಗ ಶಿಥಿಲಗೊಂಡು ಯಕ್ಷಗಾನ ರಂಗಭೂಮಿಯನ್ನೂ ಶಿಥಿಲಗೊಳಿಸುತ್ತಿದೆ. ಇದಕ್ಕೆ ಕಾರಣ ಪ್ರೇಕ್ಷಕರೋ, ಕಲಾವಿದರೋ ಅಥವಾ ಈರ್ವರೂ ಕಾರಣರೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ.
ನೆನ್ನೆ Fortune TV ಯಲ್ಲಿ Live ಪ್ರಸಾರವನ್ನು ಕಂಡ ಭ್ರಾಮರಿ ಯಕ್ಷ ವೈಭವ 2019 ರ ಚೂಡಾಮಣಿ ಪ್ರಸಂಗವನ್ನು ಇಡಿಯಾಗಿ ನೋಡಿದೆ.
ಮೊದಲೇ ಹೇಳಿದಂತೆ ಅನುಕೂಲ ನಾರಿಯರ ಸಂದರ್ಭ ಒಂದು ಘಂಟೆ ಎಳೆಯಲ್ಪಟ್ಟಿತು. ಸ್ವಲ್ಪವೂ ಹಾಸ್ಯವೆಂದು ಅನಿಸದೆ ತೀರಾ ಅಪಹಾಸ್ಯವೆಂದು ನನಗೆ ಕಂಡಿತು. ನಿರ್ವಿಕಾರ ಭಾವದಿಂದ ಶೂನ್ಯವನ್ನು ಕಾಣುವಂತೆ ಕಂಡಂತಾಯಿತು. ಇದರಿಂದ ಮುಂದಿನ ಅತ್ಯಂತ ಪ್ರಮುಖ ಭಾಗಕ್ಕೆ ಸಮಯ ತುಸು ಕಡಿಮೆಯಾಯಿತೆಂದು ಅನಿಸಿತು.
ಆದರೆ, ಸೀತಾಮಾತೆಯ ಪಾತ್ರವಂತೂ Masterpiece. ಒಂದು ಚಕಾರ ಶಬ್ಧದಷ್ಟು ಪ್ರಮಾಣದ ಋಣಾತ್ಮಕ ಅಂಶಗಳಿರದ, ಅಪಾರ ಧನಾತ್ಮಕ ಅಂಶಗಳಿದ್ದ ಅಪೂರ್ವ ಕಲಾತ್ಮಕ, ಭಾವಪೂರ್ಣ, ಅಲೌಕಿಕ ಪ್ರದರ್ಶನವಾಗಿ ಸಂಪೂರ್ಣ ಭಾವನಾಲಹರಿಯಲ್ಲಿ ಮಿಂದೆದ್ದು ಬಿಕ್ಕಿ ಬಿಕ್ಕಿ ಅತ್ತ ಅನುಭವ ನನ್ನದು.
ಸೀತಾಮಾತೆಯ ವಿರಹ, ಆಕೆಯ ವಿಹ್ವಲತೆ, ರಾವಣನ ಪ್ರೇಮನಿವೇದನೆಯ ಸಮಯದಲ್ಲಿನ ರೇಜಿಗೆಯ ಭಾವ, ಏನೂ ಮಾಡಲಾಗದ ಅಸಹಾಯಕತೆ ಈ ಎಲ್ಲಾ ಭಾವವೈವಿಧ್ಯತೆಯನ್ನು ಕಲಾವಿದ ಉನ್ನತ ರೀತಿಯಲ್ಲಿ ಭಾವದುಂಬಿ ಅಭಿವ್ಯಕ್ತಿಗೊಳಿಸಿದರು.
ಹನೂಮಂತ ಮತ್ತು ಸೀತಾಮಾತೆಯ ಸಂವಾದದ ಪ್ರದರ್ಶನವಂತೂ ಸೀತೆಯ ಪಾತ್ರ ನಿರ್ವಹಿಸಿದ ಕಲಾವಿದರ ಉತ್ಕೃಷ್ಟ ಪ್ರದರ್ಶನವಾಗಿ ನೆನಪಲ್ಲಿ ಉಳಿಯುವಂಥದ್ದು.
ಕ್ಷೇಮ | ವೇ ಹನು | ಮ ನ | ಮ್ಮವರಿಗೆ |
ರಾಮ ಲ | ಕ್ಷ್ಮಣರಾರಾ | ಜ್ಯದಲಿ ಸು | ಸ್ಥಿರವಾಗಿ
ಈ ಪದದ ಭಾವಾರ್ಥ, ಗೂಢಾರ್ಥಗಳನ್ನು ಬಹಳ ಸೊಗಸಾಗಿ ಭಾವಪೂರ್ಣವಾಗಿ ಅಭಿವ್ಯಕ್ತಿಗೊಳಿಸಿದರು. "ಕ್ಷೇಮವೇ ಹನುಮ ನಮ್ಮವರಿಗೆ? ಇದು ನಿಜವಾಗಿ ಕೇಳಬೇಕಾದ ಪ್ರಶ್ನೆಯಲ್ಲ. ಆದರೂ ಕೇಳುತ್ತಿದ್ದೇನೆ. ಸೀತೆಯಿಂದ ದೂರವಾಗಿರುವ ನನ್ನ ಪತಿ ಶ್ರೀರಾಮ ಕ್ಷೇಮವಾಗಿರಲಾರ. ನನ್ನ ಪತಿಗೆ ನನ್ನ ಮೇಲೆಷ್ಟು ಪ್ರೇಮವೆಂಬುದನ್ನು ನಾನು ಬಲ್ಲೆ. ನನಗಿಂತಲೂ ಅಧಿಕವಾಗಿ ವಿಯೋಗದ ದುಃಖದಿಂದ ನನ್ನ ಸ್ವಾಮಿ ಬಳಲುತ್ತಿರಬಹುದು" ಎಂಥಾ ಭಾವಪೂರ್ಣವೂ, ದೈವಿಕವೂ ಆದ ಮಾತುಗಳು. ಸೀತೆಯ ಮನೋಭಾವವೇನು, ವ್ಯಕ್ತಿತ್ವವೇನು ಎನ್ನುವುದು ಈ ಒಂದು ಅರ್ಥದಲ್ಲಿ ಮನದಟ್ಟಾಗಿ ಮನದುಂಬಿ ಬರುತ್ತದೆ.

ಮದನನಂ | ಗವ ಪೋಲ್ವ | ರಾಮ |
ತಮ್ಮ | ಚದುರ ಲ | ಕ್ಷ್ಮಣನು ನಿ | ಸ್ಸೀಮ ||
ಮೊದಲಿನಂ | ಗದ ಕಾಂತಿ | ಕಳವಳಿ | ಸುತ ಮತ್ತೆ |
ಹದಗುಂದ | ಲಿಲ್ಲವ | ಲ್ಲ ನೀ | ಬರುವ ದಿ |
ನದೊಳಗೆಂ | ತಿರ್ದರೆ | ಲ್ಲ ನ | ಮ್ಮವರಿಗೆ || ಈ ಪದದ ಅರ್ಥವೂ ಸಹ ಅರ್ಥಗರ್ಭಿತವಾಗಿತ್ತು. "ನನ್ನ ಪತಿ ರೂಪದಲ್ಲಿ ಮನ್ಮಥ ಸದೃಶರು. ನನ್ನ ಪತಿ ಶ್ರೀ ರಾಮ 32 ಲಕ್ಷಣಗಳಿರುವವರು. ನನ್ನ ವಿರಹದಲ್ಲಿ ತಮ್ಮ ಮೊದಲಿನ ಉತ್ಸಾಹ, ಅಂಗದ ಕಾಂತಿ ಕುಂದಿ ಸೊರಗಲಿಲ್ಲವಲ್ಲ?"

ಶ್ರೀರಾಮ ವಿಯೋಗದ ದುಃಖ, ಅದರ ಜೊತೆಯಲ್ಲಿ ಪತಿ ಶ್ರೀರಾಮನ ಮೇಲಣ ಕಾಳಜಿಯ ಅಭಿವ್ಯಕ್ತಿ ವರ್ಣಿಸಲು ಕಷ್ಟಸಾಧ್ಯ ನನಗೆ. ಒಳ್ಳೆಯ ಪ್ರತಿಭಾನ್ವಿತ ಲೇಖಕರಿಗಾದರೂ ಸಾಧ್ಯವಾದೀತೋ ಇಲ್ಲವೋ?
ಸೀತೆಯನ್ನು ಕಂಡು ಮಾತಾಡಿಸಿ ಬಂದಿದ್ದರ ದ್ಯೋತಕವಾಗಿ ಏನನ್ನಾದರೂ ನೀಡೆಂದು ಹನೂಮಂತ ಕೇಳಿಕೊಂಡಾಗ ತನ್ನಲ್ಲುಳಿದುಕೊಂಡಿದ್ದ ಚೂಡಾಮಣಿಯನ್ನು ಕೊಡುವ ಸಂದರ್ಭದ ಅರ್ಥವೂ ವಿದ್ವತ್ಪೂರ್ಣವಾಗಿತ್ತು.
ಚೂಡಾಮಣಿ ಜನಕ ಮಹಾರಾಜನಿಗೆ ದೊರಕಿದ್ದು ಹೇಗೆ? ಅದನ್ನು ತನ್ನ ಮತ್ತು ಶ್ರೀರಾಮನ ವಿವಾಹದ ಸಮಯದಲ್ಲಿ ತಂದೆ ಶ್ರೀರಾಮನಿಗೆ ಕೊಟ್ಟಿರುವ ಹಿನ್ನೆಲೆ. ಪತಿ ಶ್ರೀರಾಮ ಆ ಚೂಡಾಮಣಿಯನ್ನು ತನಗಿತ್ತ ವಿಚಾರದ ಒಳಹೂರಣವನ್ನು ವಿವರಿಸಿದರು.
ಏಸುದಿನ | ಬೇ | ಕೆನ್ನ ಪ್ರಾ | ಣೇಶನ ಕಾಂ | ಬುದಕಿನ್ನು |
ಬೇಸರಿಕೆ | ಯೆಂಬುದೇನ | ಹೇಳಲಿ | ಎಂತು | ತಾಳಲಿ |
ಬೇಸರಿಕೆ | ಯೆಂಬುದೇನ | ಹೇಳಲಿ | ಎಂತು | ತಾಳಲಿ |
ಯಕ್ಷಗಾನದ ಮಹಾನ್ ಕವಿ ಕುಂಬಳೆಯ ಪಾರ್ತಿಸುಬ್ಬ ಅದೆಷ್ಟು ಸೊಗಸಾಗಿ ಸೀತಾರಾಮರ ಪ್ರೇಮವನ್ನು ಅರ್ಥ ಮಾಡಿಕೊಂಡು ಈ ಪದದಲ್ಲಿ ಬಹು ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಆ ಪದದ ಭಾವವನ್ನು ಅಷ್ಟೇ ಸೊಗಸಾಗಿ ಅರ್ಥಮಾಡಿಕೊಂಡು ಅಭಿನಯ ಮತ್ತು ಮಾತಿನ ಮೂಲಕ ಸೀತೆಯ ಪಾತ್ರಧಾರಿ ಕಲಾವಿದರು ಅನಾವರಣಗೊಳಿಸಿದರು.
ಸೀತಾಮಾತೆಯ ಪಾತ್ರವನ್ನು ನಿರ್ವಹಿಸಿದ ಕಲಾವಿದರ ಒಟ್ಟೂ ಪ್ರಸ್ತುತಿ ಪಾತ್ರೋಚಿತವಾಗಿ, ಕಲೋಚಿತವಾಗಿದ್ದು ಪ್ರಸಂಗದ ಆಶಯವನ್ನು ಪರಿಣಾಮಕಾರಿಯಾಗಿ ನೆರವೇರಿಸಿತು.
ಚೂಡಾಮಣಿಯನ್ನು ಹನುಮಂತನಿಗಿತ್ತ ಬಳಿಕ ಸೀತಾಮಾತೆ ಕೇಳುವ ಒಂದೇ ಒಂದೇ ಮಾತು ಏನೆಂದರೆ ನನ್ನ ರಾಮನನ್ನು ನಾನು ಯಾವಾಗ ಕಾಣುತ್ತೇನೆ ಎಂದು ಮಾತ್ರ. ಆಕೆಗೆ ರಾವಣನ ಸೆರೆಯಲ್ಲಿ ತಾನಿರುವ ಯೋಚನೆಯಿಲ್ಲ. ಎಂಥಾ ಪವಿತ್ರ, ದೈವಿಕ ದಾಂಪತ್ಯವದು.
*ಸೀತಾಮಾತೆಯ ಪಾತ್ರಧಾರಿಯ ವಿಶೇಷಗಳು :*
*1)* ಅನುಕೂಲ ನಾರಿಯರ ವೈವಿಧ್ಯಮಯವಾದ ಆದರೆ ಅವಶ್ಯವಿರದ ಒಂದು ಘಂಟೆ ಸಮಯದ ಚೇಷ್ಟೆಗಳ ಸಂದರ್ಭದುದ್ದಕ್ಕೂ ಸಹ ಸೀತೆಯ ಪಾತ್ರಧಾರಿ ಶ್ರೀರಾಮನ ವಿರಹದ ಭಾವವನ್ನು, ಬೇಸರ, ಬೇಗುದಿಯನ್ನು ವ್ಯಕ್ತಪಡಿಸುತ್ತ ಪಾತ್ರದಲ್ಲಿಯೇ ತನ್ಮಯರಾಗಿದ್ದರು. ಒಂದೆಳೆಯಷ್ಟರ ಭಾವವ್ಯತ್ಯಾಸ ಕಂಡು ಬರಲಿಲ್ಲ.
*2)* ನಾನು Live ನೋಡುತ್ತಿದ್ದೆನಷ್ಟೆ. ಅನುಕೂಲ ನಾರಿಯರ ಸಂದರ್ಭದಲ್ಲಿ Camera ಸೀತೆಯ ಪಾತ್ರಧಾರಿಯೆಡೆ Focus ಮಾಡುತ್ತಿದ್ದಾಗಲೂ ಭಾವವ್ಯತ್ಯಾಸ ಕಂಡುಬರಲಿಲ್ಲ. ಶೈಕ್ಷಣಿಕ ಹಿನ್ನೆಲೆಯಿರುವ ಹಾಗೂ ತಂತ್ರಜ್ಞಾನಗಳ ಕುರಿತಾದ ಮಾಹಿತಿ, ಎಚ್ಚರವಿರುವ ಕಲಾವಿದನಾದವನಿಗೆ ಮಾತ್ರ ಇಂತಹ ಪ್ರದರ್ಶನ ಸಾಧ್ಯ. ಇದು ಒಂದು ತಪಸ್ಸು.
*3)* ಈ ಕಲಾವಿದರು ತಾವು ಮಾಡುವ ಪಾತ್ರದ ಕುರಿತಾಗಿ ಶಿಸ್ತುಬದ್ಧವಾದ ಅಧ್ಯಯನವನ್ನು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಪಾತ್ರ ಪ್ರಸ್ತುತಿಯ ಶಿಸ್ತಿನ ಬಗ್ಗೆ, ಅಚ್ಚುಕಟ್ಟುತನದ ಬಗ್ಗೆ ಕಟು ಎಚ್ಚರ ವಹಿಸುತ್ತಾರೆ ಎನ್ನುವುದು ಕಲಾವಿದನ ಮತ್ತು ಕಲೆಯ ನೆಲೆಯಿಂದ ಆಶಾದಾಯಕ ಬೆಳವಣಿಗೆ.

ಇಡಿಯ ಚೂಡಾಮಣಿ ಪ್ರಸಂಗದಲ್ಲಿ ಸೀತಾಮಾತೆಯ ಪಾತ್ರ ಅಚ್ಚೊತ್ತಿ ನಿಂತಿತು. ಈ ಸೀತೆಯ ಪಾತ್ರಪೋಷಣೆಯಲ್ಲಿ ಸೀತೆ ಪಾತ್ರಧಾರಿಯ ಪಾತ್ರ ಹಿರಿದು. ಆದರೆ ಸುಂದರರಾವಣ ಮತ್ತು ಹನೂಮಂತ ಪಾತ್ರಧಾರಿಗಳ ಪಾತ್ರ ಪ್ರಸ್ತುತಿ ಪೋಷಕವಾಗಿ ಪರಿಣಮಿಸಿದ್ದೂ ಹೌದು.
please subscribe to my youtube channel- https://www.youtube.com/channel/UC8JeLpTTF9RiIlI5LrjisDA?sub_confirmation=1
No comments:
Post a Comment